Tuesday, 20 September 2011

ಕಾದಿರುವೆ ನಿನಗಾಗಿ

ಗೆಳೆಯಾ,
ನೀ ಹೀಗೆ ಮಾಡಬಹುದೆಂದು ಎಂದು ಎಣಿಸಿರಲಿಲ್ಲ. ಆ ಮುಸ್ಸಂಜೆ ತಂಪಿನಲಿ, ತುಂತುರು ಹನಿಗಳಲಿ ನಿನ್ನ ಕೈ ಹಿಡಿದು ನಡೆವಾಗ, ಪ್ರೀತಿಯ ಮಾತನಾಡಿ ಮುತ್ತಿನ ಮಳೆಗರೆವಾಗ ಒಂದು ಸಣ್ಣ ಸುಳಿವು ನೀಡದೆ ಈಗ ಹೀಗೆ ಹೊರಟು ಹೋದರೆ ಹೇಗೆ??? ಮರುಭೂಮಿಯಂತಿದ್ದ ಈ ಮನದೊಳಗೆ ಪ್ರೀತಿಯೆಂಬ ಚಿಲುಮೆ ಹರಿಸಿ ಮತ್ತೆ ಆ ಮರುಭೂಮಿಯಲಿ ನನ್ನ ಒಂಟಿಯಾಗಿಸಿದ್ದು ಏಕೆ? ಕಡಲ ತೀರದಲ್ಲಿ ನಿಂತು ಕಡಲಿಗೂ ಸಾಧ್ಯವಿಲ್ಲ ಆ ಬಾನನ್ನು ಅಳೆಯಲು ಆದರೆ ನಮ್ಮ ಪ್ರೀತಿ ಆ ಬಾನಿಗಿಂತಲೂ ಮಿಗಿಲು ಎನ್ನುತ್ತಿದ್ದ ನನ್ನವನ ಹೀಗೆ ನನ್ನ ನಡು ನೀರಲ್ಲಿ ಬಿಟ್ಟು ಹೋದದ್ದು ಎಂದೆನಿಸುತ್ತಿದೆ. ಹೀಗೆ ಮಾಡಿದ್ದಾದರೂ ಏಕೆ ಎಂದು ನಿನ್ನ ಕೇಳೋಣವೆಂದರೆ ಅದಕ್ಕೂ ನಿನ್ನ ಸುಳಿವಿಲ್ಲ.

ಕಾರಣ ಹೇಳದೆ ಹೋದ ನಿನ್ನ ಬರುವಿಕೆಗೆ ಕಾತುರದಿ ಕಾದಿರುವ

ಇಂತಿ ನಿನ್ನವಳು

No comments:

Post a Comment