ನೀನಿರದ ಜೀವನ
ಮರೆವಿನ ಹಾದಿಯಲ್ಲಿ ಸಾಗುವಾಗ
ಹೀಗೇಕೆ ಕಾಡುತಿವೆ ನಿನ್ನ ನೆನಪುಗಳು
ಎಲ್ಲಾ ಮುಗಿದು ಮನವು ಹಾಡುವಾಗ
ಮತ್ತೇಕೆ ಎದುರಾಗುತ್ತಿದೆ ಶೋಕಗೀತೆಗಳು
ನೀ ದೇಹ ನಾ ಛಾಯೆಯಂತಿದ್ದ ಭಾವಗಳು
ಬದಲಾದ ದಿನದಿಂದ ಬರೀ ನೋವ ಲಹರಿ
ಒಬ್ಬರನೊಬ್ಬರು ಕಣ್ತುಂಬಿಕೊಂಡ ಕ್ಷಣಗಳು
ಮರೆಯಾದವು ಕಾಡಿ ನಿನ್ನ ಗೈರುಹಾಜರಿ
ನಿನ್ನ ಪ್ರತಿಬಿಂಬದ ಪ್ರತಿರೂಪದಂತಾದವು ಕಂಬನಿಗಳು
ಭ್ರಮೆಯೊಂದು ಮೂಡಿ ನೀ ನೀಡಿದಂತೆ ಹಾಜರಿ
ಉಳಿದವು ಬರೀ ನೋವು, ದುಃಖ, ದುಮ್ಮಾನಗಳು
ನೀನಿರದ ಜೀವನವಾಗಿ ಖಾಲಿ ಕೋಣೆಗೆ ಮಾದರಿ
ಮರೆವಿನ ಹಾದಿಯಲ್ಲಿ ಸಾಗುವಾಗ
ಹೀಗೇಕೆ ಕಾಡುತಿವೆ ನಿನ್ನ ನೆನಪುಗಳು
ಎಲ್ಲಾ ಮುಗಿದು ಮನವು ಹಾಡುವಾಗ
ಮತ್ತೇಕೆ ಎದುರಾಗುತ್ತಿದೆ ಶೋಕಗೀತೆಗಳು
ನೀ ದೇಹ ನಾ ಛಾಯೆಯಂತಿದ್ದ ಭಾವಗಳು
ಬದಲಾದ ದಿನದಿಂದ ಬರೀ ನೋವ ಲಹರಿ
ಒಬ್ಬರನೊಬ್ಬರು ಕಣ್ತುಂಬಿಕೊಂಡ ಕ್ಷಣಗಳು
ಮರೆಯಾದವು ಕಾಡಿ ನಿನ್ನ ಗೈರುಹಾಜರಿ
ನಿನ್ನ ಪ್ರತಿಬಿಂಬದ ಪ್ರತಿರೂಪದಂತಾದವು ಕಂಬನಿಗಳು
ಭ್ರಮೆಯೊಂದು ಮೂಡಿ ನೀ ನೀಡಿದಂತೆ ಹಾಜರಿ
ಉಳಿದವು ಬರೀ ನೋವು, ದುಃಖ, ದುಮ್ಮಾನಗಳು
ನೀನಿರದ ಜೀವನವಾಗಿ ಖಾಲಿ ಕೋಣೆಗೆ ಮಾದರಿ
.jpg)
No comments:
Post a Comment